ಪೀಟ್ ಜೋಸೆಫ್
	1865 ಧರ್ಮ ಬೋಧೆಯ ಜೊತೆಗೆ ಸಾಹಿತ್ಯ ಸೇವೆಯನ್ನೂ ಮಾಡಿದವು. ಯೂರೋಪಿನಲ್ಲಿ ಹುಟ್ಟಿದ ಈತ ಚರ್ಚ್ ಮಿಶನ್ ಸೊಸೈಟಿಯ ಒಬ್ಬ ಸದಸ್ಯ. ಕೇರಳಕ್ಕೆ ಬಂದದ್ದು 1833 ರಲ್ಲಿ ಅಲ್ಲಿನ ಕೊಟ್ಟಾಯಂ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದುಕೊಂಡು ಮಾವೇಲಿಕ್ಕರದಲ್ಲಿ ಧರ್ಮಬೋಧಕ ಸಂಘವೊಂದನ್ನು ಪ್ರಾರಂಭಿಸಿದ (1838). ಕ್ರಿ.ಶ. 1841 ರಲ್ಲಿ ಡ್ರಮಂಡ್ ಮತ್ತು ಎಫ್‍ಸ್ಟ್ರಿಂಗೆ ಅವರ ವ್ಯಾಕರಣಗಳನ್ನು ಅನುಕರಿಸಿ ಮಲಯಾಳಂ ಭಾಷೆಗೆ ಒಂದು ವ್ಯಾಕರಣವನ್ನು ಬರೆದು ಪ್ರಕಟಿಸಿದ. (1841). ವ್ಯಾಕರಣ ಇಂಗ್ಲಿಷಿನಲ್ಲಿದೆ. ಉದಾಹರಣೆಗಳಾದರೋ ಮಲೆಯಾಳಂ ಮತ್ತು ಇಂಗ್ಲೀಷಿನಲ್ಲಿವೆ. ಉದಾಹರಣೆಗಳಾದರೋ ಮಲೆಯಾಳಂ ಮತ್ತು ಇಂಗ್ಲೀಷಿನಲ್ಲಿವೆ. ಈತ ಬನ್ಯನ್ನನ ಪಿಲ್‍ಗ್ರಿಮ್ಸ್ ಪ್ರೋಗ್ರೆಸ್ ಕೃತಿಯನ್ನು ಮಲೆಯಾಳಂಗೆ ಭಾಷಾಂತರಿಸಿದ. 1845 ರಿಂದ 1859 ರವರೆಗೆ ಯೂರೋಪಿನಲ್ಲಿದ್ದು ಪುನಃ ಕೇರಳಕ್ಕೆ ಬಂದು ಧರ್ಮಬೋಧೆಯನ್ನೂ ಸಾಹಿತ್ಯ ಸಂಶೋಧನೆಯನ್ನೂ ಮುಂದುವರಿಸುತ್ತಿದ್ದು, ಮಾವೇಲಿಕ್ಕರದಲ್ಲಿ ತೀರಿಕೊಂಡ.									  (ಬಿ.ಕೆ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ